ಒಳ್ಳೆಯದು ಮಾತಾಡಿದರೆ ನಾಟಕ ಇವನದು ಅಂತಾರೆ,

 


ಒಳ್ಳೆಯದು ಮಾತಾಡಿದರೆ ನಾಟಕ ಇವನದು ಅಂತಾರೆ

ಕೆಟ್ಟದು ಮಾತಾಡಿದರೆ ದುಷ್ಟ ಇವನು ಅಂತಾರೆ, ಉಪದೇಶ ಹೇಳಿದರೆ ಬರೀ ಸುಳ್ಳು ಅಂತಾರೆ ಸುಮ್ಮನಿದ್ದರೆ ಸ್ವಾರ್ಥಿ ಅಂತಾರೆ

ನಾವು ಹೇಗಿದ್ದರೂ ಜನ ನಂಬಲ್ಲ. ನಮ್ಮ ಆತ್ಮ ಸಾಕ್ಷಿ ನಂಬುವಂತೆ ನವಿದ್ದರೆ ಸಾಕು

ಆತ್ಮಸಾಕ್ಷಿಯಂತೆ ನಡೆದರೂ ಎಡವಿಬೀಳೋದು ಸಹಜ. ಮನುಷ್ಯನಿಗೆ ಗಾಯವಾಗದಿದ್ದರೆ ದರ್ಯಾ ಬರೋದಿಲ್ಲ, ತಪ್ಪು ಮಾಡದೇ ಇದ್ದರೆ ಕಲಿಯುವುದಿಲ್ಲ, ಸೋಲದಿದ್ದರೆ ಗೆಲ್ಲುವುದಿಲ್ಲ.

ಯಾವುದಕ್ಕೂ ನಾವು ಉತ್ಸಾಹ ಕಳೆದುಕೊಳ್ಳಬಾರದು

ಹಾಗಿದ್ದರೆ ನಾವು ಮಾಡಬೇಕಾದುದು ಏನು

ನಾವು ಮೌನವಾಗಿದ್ದಷ್ಟು ನಮಗೆ ಒಳ್ಳೇದು. ನಮ್ಮನ್ನು ಯಾರೇ ನಿಂದಿಸಲಿ, ದ್ವೇಷಿಸಲಿ ಅಥವಾ ನಮ್ಮ ವಿರುದ್ಧ ಪಿತೂರಿ ಮಾಡಲಿ ಹಠ ಸಾಧಿಸಲಿ ನಾವು ಮೌನವಾಗಿರುವುದೇ ಉತ್ತಮ

ಒಂದೊಮ್ಮೆ ನಾವು ಅವುಗಳಿಗೆ ಪ್ರತಿಕ್ರಿಯೆ ನೀಡಲು ಹೊರಟರೆ ಅದರಿಂದ ಅನಾಹುತಗಳೇ ಹೆಚ್ಚು. ನಾವೆಷ್ಟೇ ಬೇಡ ಅಂದರೂ ಸಮಾಜದಲ್ಲಿ ಬದುಕಲೇ ಬೇಕು. ಕೆಲವರು ನಗಿಸ್ತಾರೆ ಕೆಲವರು ಅಳಿಸ್ತಾರೆ.

ಕೆಲವರು ಆಶೀರ್ವಾದ ಮಾಡತಾರೆ ಇನ್ನು ಕೆಲವರು ಪಾಠ ಕಳಿಸ್ತಾರೆ. ನಾವು ಎಲ್ಲರನ್ನು ಎಲ್ಲವನ್ನು ಸಮಾಧಾನವಾಗಿ ಸ್ವೀಕರಿಸಬೇಕು.

ಯಾರ ಜೊತೆ ಎಷ್ಟರಮಟ್ಟಿಗೆ ಇರಬೇಕು ಅಷ್ಟರ ಮಟ್ಟಿಗೆ ಮಾತ್ರ ಇರಬೇಕು. ಎಲ್ಲರೂ ನಮ್ಮವರು ಎಂದುಕೊಂಡು ಒಳ್ಳೆಯತನಕ್ಕೆ ಏನಾದರು ಮಾಡಿದರೆ ಕೊನೆಗೆ ನಾವೇ ಕೆಟ್ಟವರಾಗುತೇವೆ.

ಬಯಸಿದ್ದೆಲ್ಲ ಸಿಗುವಂತಿದ್ದರೆ ಬಯಕೆಗೆ ಬೆಲೆ ಇರುತಿರಲಿಲ್ಲ

ಅನಿಸಿದೆಲ್ಲ ಹೇಳುವಂತಿದ್ದರೆ ಮೌನಕ್ಕೆ ಅರ್ಥ ಇರುತಿರಲಿಲ್ಲ. ತಪ್ಪುಗಳೇ ಆಗದಿದ್ದರೆ ಹೊಸಪ್ರಯತ್ನ ಪಡುತಿರಲಿಲ್ಲ

ಕಣ್ಣೀರೇ ಬರದಿದ್ದರೆ ನಗುವಿನ ಆನಂದ ತಿಳಿಯುತಿರಲಿಲ್ಲ. ಕಷ್ಟಗಳು ಎದುರಾಗದಿದ್ದರೆ ಜೀವನದ ಮೌಲ್ಯ ಗೊತಾಗುತಿರಲಿಲ್ಲ.

ಕಷ್ಟಗಳು ಮನುಷ್ಯನ್ನನ್ನು ನಾಶ ಮಾಡಲು ಬರುವುದಲ್ಲ

ನಮ್ಮಲ್ಲಿರುವ ಪ್ರತಿಭೆಗಳನ್ನು ಹೊರತರಲು ಬರುತಿರಬಹುದು

ಕಷ್ಟಗಳ್ಳನ್ನು ಎದುರಿಸಿ ಹೆದರಿಸಿ. ಕಷ್ಟಗಳಿಗೂ ತಿಳಿಯಲಿ ನಿಮ್ಮನ್ನು ಸೋಲಿಸುವುದು ಕಷ್ಟವೆಂದು

ಕಷ್ಟಬಂದಾಗ ಶುರುವಾಗುವ ಮೊದಲ ಕೆಲಸವೇ ಇನ್ನೊಬ್ಬರನ್ನು ಹುಡುಕುವುದು

"ಯಾರೊಂದಿಗೆ ಹೇಳಲಿ ಎಷ್ಟು ಬೇಗ ಹೇಳಲಿ"

ಎಂಬ ಆಶಾ ಭಾವನೆ ಹಾಗು ತುಡಿತ

ಸರಿ,,,,,,,,,,,,,,,,,,,, ಯಾರೋ ಒಬ್ಬರು ಸಿಕ್ಕಿದರು,,,,,,,,,, ನಮ್ಮ ಕಷ್ಟ ಹೇಳಿದ್ದಾಯಿತು,,,,,, 

ಆಮೇಲೆ ಆಗಿದ್ದಾದರೂ ಏನು

ನಮ್ಮ ಕಷ್ಟ ಕೇಳಿ ಕೇಳಿದವರಿಗೆ ಏನು ಸಂಕಟವೇನು ಆಗಿಲ್ಲ.....  


ಆದರೂ ಸಂಕಟವಾದ ಹಾಗೆ ನಟಿಸಿದ್ದು ಹೌದು........ ಕೊನೆಗೆ ಅವರಿಗೂ ತುಡಿತ...... 

ನಮ್ಮ ಕಥೆಗಳನ್ನು ಎಷ್ಟು ಬೇಗ ಹಾಗು ಎಷ್ಟು ಸ್ವಾರಸ್ಯವಾಗಿ ಸೃಷ್ಟಿಸಲು ಸಾಧ್ಯವೋ  ಅಷ್ಟು ವೇಗದಲ್ಲಿ ಉಪ್ಪು ಕಾರ ಬಳಸಿ ಇನ್ನೊಂದಿಷ್ಟು ಜನರಿಗೆ ಹೇಳಿದ್ದಾಯಿತು.


ನಾವು ಕತ್ತಲೆಯಲ್ಲಿ ಮುಳುಗುವಾಗ ನಮ್ಮ ನೆರಳೇ ನಮ್ಮೊಂದಿಗಿಲ್ಲ ಇನ್ನು ನಮ್ಮವು ನಮ್ಮ ಸ್ನೇಹಿತರು ನಿಲ್ಲಲು ಸಾಧ್ಯವೇ

ಹಾಗಂತ ಅವರನ್ನು ದೂಷಿಸುವುದು ಸರಿಯೇ

ಕಂಡಿತಾ ಸಾಧ್ಯವಿಲ್ಲ

ಇನ್ನೊಬ್ಬರಿಂದ ಒಳ್ಳೆಯದನ್ನು ನಿರೀಕ್ಷಿಸುವುದೇ ನಮ್ಮ ಮೊದಲ ತಪ್ಪು

ಸಂಬಂಧಗಳು ಯಾವುದೇ ಆಗಿರಲಿ ಜಗಳಗಳು ಸಹಜ

ಆದರೆ ಜಗಳಗಳು ನಡೆದನಂತರವು ಸಂಬಂಧಯೂ ಹಾಗೆಯೆ ಮುಂದುವರೆದರೆ ಅದೇ ನಿಜವಾದ ಸಂಬಂದಗಳು

ವಿಚಾರಗಳು ಮುಖ್ಯವಾಗಿದ್ದರೆ ವ್ಯಕ್ತಿಗಳನ್ನು ದೂರವಿಡಿ. ವ್ಯಕ್ತಿಗಳು ಮುಖ್ಯವಾದರೆ ವಿಚಾರಗಳನ್ನು ದೂರವಿಡಿ

ಜೀವನದಲ್ಲಿ ಒಂದೇ ಏಟಿಗೆ ಎಲ್ಲವು ಮೇಲೆ ಕೆಳಕ್ಕಾಗುತ್ತದೆ ಅದು ನಮ್ಮ ಕನಸಾಗಿರಬಹುದು ಇಲ್ಲ ನಮ್ಮ ಸಂಬಂದಗಳು.

Comments

Popular posts from this blog

ಕೈ ಗಳು ಇಲ್ಲದವನಿಗೂ ಅದೃಷ್ಟ ಅನ್ನೋದು ಖಂಡಿತ ಇದೆ

ಪಕ್ಕದ್ಮನೆ ರಾಗಿ ಮುದ್ದೆ