ಕೈ ಗಳು ಇಲ್ಲದವನಿಗೂ ಅದೃಷ್ಟ ಅನ್ನೋದು ಖಂಡಿತ ಇದೆ



ಯಾರನ್ನೋ ಮೆಚ್ಚಿಸ್ಲಿಕ್ಕೆ ನಾವು ಬದುಕಬೇಕಾ ಅಥವಾ ಪ್ರಯತ್ನ ಪಡಬೇಕಾ ? ಏನಂತೀರಾ ? 

ಈ ಪ್ರಯತ್ನದಲ್ಲಿ ನಾವು ನಮ್ಮನ್ನೇ ಹಾಗು  ನಮ್ಮ ಜೀವನದ ಬಹಳಷ್ಟು ಒಳ್ಳೆಯ ಕ್ಷಣಗಳನ್ನು ಕಳೆದುಕೊಳ್ತೀವಿ. 

ಈ ಪ್ರಪಂಚಕ್ಕೆ ತೋರಿಸ್ತಿನಿ ಅದ್ಕೊಸ್ಕರ ಸಾಧಿಸ್ತಿನಿ ಅನ್ನೋ ಗ್ಯಾಪ್ನಲ್ಲಿ ನಾವು ನಿಜವಾಗಲೂ ಸಾಧಿಸಬೇಕಾದ ಕೆಲಸಗಳು ಮರೆಯಾಗುತ್ತವೆ.

ಸಾದಿಸಿದ ನಂತರ ನೋಡಿ,,,,, ನಾನು ಮಾಡಿದೆ,,,, ಸಾಧಿಸಿದೆ ಎಂದು ಹಾರಾಡೋ ಹೊತ್ತಿಗೆ,,,,,, ನಾವು ಯಾರಿಗೆ ತೋರಿಸ್ಬೇಕು ಅಂತ ಸಾಧನೆ ಮಾಡಿದಿವೊ,,,,,,,,,,,,, ಅವರಿಗೆ ನಮ್ಮ ಸಾಧನೆಯಿಂದ ಯಾವ ವ್ಯತ್ಯಾಸವು ಆಗದು. 

ಇನ್ನೊಬ್ಬರಿಗೆ ಮೆಚ್ಚಿಸಲು ನಾವು ಜೀವಿಸುವುದು ತಪ್ಪು. ನಾವು ಮಾಡುವ ಯಾವ ಸಾಧನೆಯಿಂದ ಯಾರಿಗೆ ಎಳ್ಳಷ್ಟ್ಟು ವ್ಯತ್ಯಾಸ ಆಗೊಲ್ವೋ,,,,,, ಅವರಿಗೆ ಸಮಜಾಯಿಸಲು ಜೀವನ ಪೂರ್ತಿ ವ್ಯರ್ಥ ಪ್ರಯತ್ನ ಬಿಟ್ಟು ಬಿಡಿ. 

ಬಹಳಷ್ಟು ಇದೆ ಜೀವನದಲ್ಲಿ ಸಾದಿಸಲು. 

ಸಾಧನೆ ಎಂದ ಮಾತ್ರಕ್ಕೆ ದುಡ್ಡಿನ ಸಂಪಾದನೆಯಷ್ಟೇ ಅಲ್ಲ. ಈ ಪ್ರಪಂಚಕ್ಕೆ ನಾವು ಕೊಡಬೇಕಾದುದು ಬಹಳ ಇದೆ.

ಬದುಕು ನಿದಾನವಾಗಿ ಪಾಠ ಕಲಿಸುತ್ತೆ. ನಿನ್ನತನವನ್ನು ಅಡವಿಟ್ಟು ಯಾರನ್ನು ನೀನು ಪ್ರೀತಿಸುವ ಅಗತ್ಯವಿಲ್ಲ. ಏಕೆಂದರೆ ಇಲ್ಲಿ ಯಾರಿಗೂ ಯಾರೂ ಅನಿವಾರ್ಯರಲ್ಲ. ಸ್ವಲ್ಪ ಜನ ನಿಮ್ಮನ್ನು ಇಷ್ಟ ಪಡುತ್ತಾರೆ. ಸ್ವಲ್ಪ ಜನ ಇಷ್ಟ ಪಟ್ಟಂತೆ ನಟಿಸ್ತಾರೆ. ಇನ್ನು ಸ್ವಲ್ಪ ಜನ  ತಮ್ಮ ಅವಶ್ಯಕತೆಗಳಿಗೋಸ್ಕರ ಬಳಸಿಕೊಳ್ತಾರೆ. 

ಸಮಯ ಎಲ್ಲವನ್ನು ಸರಿಪಡಿಸುತ್ತದೆ ಸಮಾದಾನದಿಂದಿರಿ. ನಿಮ್ಮ ಬಗ್ಗೆ ಬೇರೆಯಾವುರು ಏನು ಆಲೋಚಿಸುತ್ತಾರೆ ಎನ್ನುವುದು ನಿಮ್ಮ ಕಾಯಕವಾಗದಿರಲಿ. ನಿಮ್ಮನ್ನು ಮತ್ತೊಬ್ಬರಿಗೆ ಹೋಲಿಸದಿರಿ ಆವರು ನಡೆದು ಬಂದ ದಾರಿ ನಿಮಗೆಷ್ಟು ತಿಳಿದಿರಬಹುದು.?

ಸಮಸ್ಯೆಗಳ ಬಗ್ಗೆ ಚಿಂತಿಸದಿರಿ, ಏಕೆಂದರೆ ಅದರ ಪರಿಹಾರವನ್ನು ಯೋಚಿಸಲು ಇರುವ ಸಮಯವನ್ನು ಅದು ತಿಂದು ಹಾಕುತ್ತದೆ. ನಿಮ್ಮ ಸಂತೋಷವನ್ನು ನೀವೇ ಹುಡುಕಿಕೊಳ್ಳಬೇಕು. ಬೇರೆಯವರಿಂದ ಎಂದೂ ಅಪೇಕ್ಷಿಸಬಾರದು. 

ಹಣದಿಂದ ಸಂತೋಷ ಹಾಗು ಪರಿಹಾರವನ್ನು ಕಂಡುಕೊಳ್ಳಲು ಸಾಧ್ಯವಿಲ್ಲ. ಹಣವಿದ್ದವರು ಬೆಂಜ್ ಗಾಡಿಯಲ್ಲಿ ಕೂತು ಅಳಬಹುದು ಅಷ್ಟೇ. ಯಾರಿಗಾದರೂ ಸಹಾಯದ ಅವಶ್ಯಕತೆಯಿದ್ದರೆ ಸಹಕರಿಸಿ, ಸಮಯ ಬಂದಾಗ ಅದೇ ಸಹಾಯ ನಿಮಗೆ ಮರಳಿ ಬರಬಹುದು. 

ಸೋಲಿನಲ್ಲೇ ಸಾಧನೆ ಆರಂಭವಾಗೋದು. ಸೋಲದಿರೋದು ಹೇಗೆಂದು ಸೋಲಿನಿಂದಲೇ ಕಲಿಯಬೇಕು. ನೀವು ಮಾಡುವ ಕೆಲಸವನ್ನು ಆಟದಂತೆ ಆನಂದಿಸಿ, ಆದರೆ ನಿಮ್ಮ ಕೆಲಸದೊಂದಿಗೆ ಆಟವಾಡದಿರಿ. 

ಶಾಲೆಯಲ್ಲಿ ಯಾರಿಂದಾನೋ ಕಾಪಿ ಹೊಡೆದು ಪಾಸಾದ ಮಕ್ಳು ಎತ್ತರಕ್ಕೆ ಬೆಳೆದರೆ ಕಪಿ ತೋರಿಸಿದೋನೂ ಎಲ್ಲೋ ಕಣ್ಮರೆಯಾಗಿ ಹೋಗುತ್ತಾನೆ. ಬಹುಶ ಅವನು ಯಾವುದಾದರೂ ಸಮಯ ಸಂದರ್ಭವನ್ನು ದೂಷಿಸಿ ಕೂತಿರಬಹುದು. ಅಪ್ಪ ಅಮ್ಮ ಇಲ್ಲ,,,, ಅಥವಾ ಹಣವಿಲ್ಲ,,,, ಅಥವಾ ಅರೋಗ್ಯ ಸರಿ ಇಲ್ಲ .... ಈ ಎಲ್ಲ ವಿಚಾರಗಳು ಅವನನ್ನು ಪಾತಾಳಕ್ಕೆ ನೂಕಿರಬಹುದು. 

ಈಗ ಹೇಳೋದಿಷ್ಟೇ ನಮ್ಮ ಕೆಯ್ಯಲಿ ಇಲ್ಲದಿರುವುದು ಬಿಟ್ಟು ಬಿಟ್ಟು ಏನು ಇದೆಯೋ ಅದರ ಕಡೆ ಗಮನ ಕೊಡುವ. 

ಯಾವುದು ನಮ್ಮಿಂದ ಸಾಧ್ಯವೋ ಅದರಲ್ಲಿ ನಮ್ಮ ಜವಾಬ್ಧಾರಿ ತೋರಿಸಿ ಎದ್ದು ನಿಲ್ಲುವ, ನಮ್ಮ ಹಣೆಬರಹ ಬದಲಾಯಿಸಬಹುದು ಯಾಕೆಂದರೆ ಕೈ ಗಳು ಇಲ್ಲದವನಿಗೂ ಅದೃಷ್ಟ ಅನ್ನೋದು ಖಂಡಿತ ಇದೆ 

ಮಾತು ಮಾವಿನ ಹಣ್ಣಿನಂತಿರಲಿ ಮರದಿಂದ ಬೀಳುವ ಮೊದಲೇ ಎಚ್ಚರ ವಹಿಸಿ 

Comments

Popular posts from this blog

ಒಳ್ಳೆಯದು ಮಾತಾಡಿದರೆ ನಾಟಕ ಇವನದು ಅಂತಾರೆ,