ನಿಮ್ಮ ಮನಸ್ಸನ್ನು ಶುದ್ಧಗೊಳಿಸಲು ಈ ಆರು ವಿಧಾನಗಳು
ಯಾವ ವ್ಯಕ್ತಿ ಅಥವಾ ಒಂದು ಗುಂಪು ನಿಮಗೆ ಕೊಡಬೇಕಾದ ಮರ್ಯಾದೆ ಅಥವಾ ಮಾತನಾಡುವ ಅಧಿಕಾರ ನಿಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಅಧಿಕಾರ ಕೊಡುವುದಿಲ್ಲವೋ ಆ ಗುಂಪಿನಿಂದ ಹೊರಗಿರೋದೇ ಒಳ್ಳೇದು.
ಜೀವನ ಅಂದ್ರೆ ಇಷ್ಟೇ. ಹರಿದ ಚಪ್ಪಲಿಗಾದರೂ ಮನೆಯಲ್ಲಿ ಜಾಗ ಇರುತ್ತೆ. ಆದರೆ ಮನುಷ್ಯ ಸತ್ತರೆ ಮನೆಯಲ್ಲಿ ಜಾಗ ಇರೋಲ್ಲ.
ಮನೆಯಿಂದ ಹೊರಗಡೆ ಇಡ್ತಾರೆ. ಇದು ನಮ್ಮ ಜೀವನ ಸುಖ ದುಃಖಗಳಿಗೆ ನಾವೇ ಹೊಣೆ. ಇಲ್ಲಿ ಯಾರೂ ಕಾಪಾಡಲು ಬರೋದಿಲ್ಲ.
ದಾಹವೆಂದು ನೀರು ಕೇಳಿದವನ ಜೀವ ಉಳಿಸದೆ ಶವಕ್ಕೆ ಅಮೃತ ಸುರಿದರೇನು ಫಲ. ತಂದೆ ತಾಯಿಯ ಸೇವೆ ಮಾಡದೇ ನಿತ್ಯ ದೇವರ ಪೂಜೆ ಮಾಡಿದರೇನು ಫಲ.
ಕಹಿಯಾದರೂ ಸತ್ಯವಾದ ಪ್ರಕೃತಿಯ ಮೂರು ನಿಯಮಗಳು
ಪ್ರಕೃತಿಯ ಮೊದಲ ನಿಯಮ
ಹೇಗೆ ಗದ್ದೆಯಲ್ಲಿ ಬೀಜ ಹಾಕಿಲ್ಲವೆಂದರೆ ಅಲ್ಲಿ ಹುಲ್ಲುಕಡ್ಡಿ ಬೆಳೆಯುತ್ತೋ ಹಾಗೆ ಬುದ್ದಿಯಲ್ಲಿ ಸಕಾರಾತ್ಮಕ ವಿಚಾರಗಳು ತುಂಬಿಲ್ಲವೆಂದರೆ ನಕಾರಾತ್ಮಕ ವಿಚಾರಗಳು ಆ ಜಾಗವನ್ನು ಆಕ್ರಮಿಸಿಕೊಳ್ಳುತ್ತದೆ.
ಪ್ರಕೃತಿಯ ಎರಡನೇ ನಿಯಮ :
ಯಾರ ಬಳಿ ಏನಿರುತ್ತದೋ ಅದನ್ನೇ ಇತರರಿಗೆ ನೀಡುತ್ತಾರೆ. ಸುಖಿ ಸುಖವನ್ನು ಹಂಚುತ್ತಾನೆ. ದುಃಖೀ ದುಃಖವನ್ನು ಹಂಚುತ್ತಾನೆ.
ಜ್ನ್ಯಾನಿ ಜ್ನ್ಯಾನವನ್ನು ಹಂಚುತ್ತಾನೆ. ಭ್ರಮಿತ ಭ್ರಮೆಯನ್ನು ಹಂಚುತ್ತಾನೆ. ಭಯ ಬೀತಾ ಭಯವನ್ನು ಹಂಚುತ್ತಾನೆ.
ಪ್ರಕೃತಿಯ ಮೂರನೇ ನಿಯಮ
ತಮಗೆ ಜೀವನದಿಂದ ಏನೆಲ್ಲಾ ಸಿಕ್ಕಿದೆಯೋ ಅದನ್ನು ಜೀರ್ಣಿಸಿಕೊಳ್ಳಲು ಕಲಿಯಿರಿ. ಏಕೆಂದರೆ ಭೋಜನ ಜೀರ್ಣವಾಗದೇ ಇದ್ದರೆ ರೋಗ ಹೆಚ್ಚುತ್ತದೆ.
ಪ್ರಶಂಸೆ ಜೀರ್ಣವಾಗದಿದ್ದರೆ ಅಹಂಕಾರ ಹೆಚ್ಚುತ್ತದೆ. ನಿಂದನೆ ಜೀರ್ಣವಾಗುತ್ತದೆ. ಶತ್ರುತ್ವ ಹೆಚ್ಚುತ್ತದೆ. ದುಃಖ ಜೀರ್ಣವಾಗದಿದ್ದರೆ ನಿರಾಸೆ ಹೆಚ್ಚುತ್ತದೆ.

Comments
Post a Comment