ಆ ಶ್ರೀಮಂತೆಗೂ ಆ ಬಿಕ್ಷುಕನಿಗೂ ಇದ್ದದು ಆ ಒಂದು ಸಣ್ಣ ಗೆರೆ

ನಾನು ನನ್ನದು ನನ್ನ ದಾಹ...

ನಮ್ಮ ದೇವಾಲಯದಲ್ಲಿ ಎಲ್ಲಾ ಬೇಸಿಗೆ ರಜೆಗಳಲ್ಲಿ ಕೆಲವು ಆಕ್ಟಿವಿಟೀಸ್ ಗಳನ್ನ ಮಕ್ಕಳಿಗೆ ಅಂತಾನೆ ಹಮ್ಮಿಕೊಂಡಿರ್ತಿವಿ.

ಅದು ಕೇವಲ 1 ವಾರ ಅಷ್ಟೆ. ನಮ್ಮ ಗುರುಗಳು ತುಂಬಾ ಒಳ್ಳೆಯವರು...... 

ಮಕ್ಕಳಿಗೆ ಬೇಕಾದ ಬಿಸ್ಕೆಟ್ ಮತ್ತು ಜ್ಯೂಸು ಇವೆರಡನ್ನೂ ತುಂಬಾ ಮುತುವರ್ಜಿ ವಹಿಸಿ ಏರ್ಪಡಿಸುತ್ತಾರೆ..... 

ಈ ಜ್ಯೂಸು ಮತ್ತು ಬಿಸ್ಕುಟ್ ಹಂಚೋ ಕೆಲಸದಲ್ಲಿ ಸಹಜವಾಗಿ ನಾನು ಕೆಲಸ ನಿರ್ವಹಿಸಿದ್ದೆ. 

ಈ ಸಂದರ್ಭ ಒಂದು ಸಣ್ಣ ಘಟನೆ ನಡೆಯಿತು. ಅದನ್ನೇ ಹೇಳೋಣ ಅಂತ ಇಲ್ಲಿ ಬರೀತಿದ್ದೀನಿ. 

ಸುಮಾರು 11 ಗಂಟೆಗೆ ಮಕ್ಕಳಿಗೆ ಬ್ರೇಕ್ ಕೊಟ್ಟು ಜ್ಯೂಸು ಹಂಚಿದ್ದಾಯಿತು. ಈ ಸಂದರ್ಭದಲ್ಲಿ ಏನಿಲ್ಲಾಂದ್ರೂ 5 ರಿಂದ 10 ಲೋಟ ಜ್ಯೂಸು ಆದ್ರೂ ಒಮ್ಮೊಮ್ಮೆ ಮಿಕ್ಕುತ್ತೆ. 

ಈ ಮಿಕ್ಕಿದ ಜ್ಯೂಸು ನ ಅಲ್ಲೇ ಕಾಯ್ಕೊಂಡು ಕೂತಿರೋ ಕೆಲವು ಅಪ್ಪ ಅಮ್ಮಂದಿರಿಗೂ ಕೊಡೋದು ವಾಡಿಕೆ. 

ಕೆಲವುರು ತಗೋತಾರೆ.... ಕೆಲವುರು ಇಲ್ಲ ಬೇಡ ಅಂದು ಬಿಡತಾರೆ. ಹಾಗಂತ ತುಂಬ ಪೋಷಕರೇನೂ ಕಾಯ್ಕೊಂಡು ಕೂತಿರೋಲ್ಲ.

ತೀರಾ ಸಣ್ಣ ಮಕ್ಕಳಾಗಿದ್ದರೆ ಒಂದೋ ಎರಡು ಹೆಂಗಸರು ಅಷ್ಟೆ. 

ಈ ಮದ್ಯದಲ್ಲಿ ಕೆಲವು ಭಕ್ತರು ದೇವಾಲಯಕ್ಕೆ ಬಂದು ಹೂಗೋದುಂಟು. 

ಅವರು ಕೆಲವೊಮ್ಮೆ ದೇವಾಲಯದ ಮೆಟ್ಟಿಲಲ್ಲಿ ಕಾಣಲಿಕ್ಕೆ ಸಿಗ್ತಾರೆ. 

ಹೀಗೆ ಅದೊಂದು ದಿನ ಬಹಳ ಒಳ್ಳೆ ಡ್ರೆಸ್ ಮಡಿದ ಸುಮಾರು 4೦ ರಿಂದ 45 ರ ಆಸುಪಾಸಿನ ಭಕ್ತೆಯೊಬ್ಬಳು ಅಲ್ಲಿಗೆ ಬಂದಿದ್ದಳು. 

ಅವಳು ಆಗರ್ಭ ಶ್ರೀಮಂತೆಯೇನು ಅಲ್ಲದಿದ್ದರೂ ಮಾದ್ಯಮವರ್ಗಕ್ಕಿಂತ ಸ್ವಲ್ಪ ಮೇಲು ಅಂತಾನೆ ಹೇಳಬಹುದು. 

ಸರಿ.... ಈಗ ಈ ಹೆಂಗಸು ಬಂದಾಗ ನಮ್ಮ ಜ್ಯೂಸು ಬಿಸ್ಕುಟ್ ಹಂಚೋ ಕಥೆಗೆ ಬರೋಣ. 

ಅಂದು ನಾನು ಎಲ್ಲಾ ಮಕ್ಕಳಿಗೆ ಜ್ಯೂಸು ಹಂಚಿ ಉಳಿದಿರೋ ಜ್ಯೂಸು ನ ಅಲ್ಲಿ ಕುಳಿತಿರುವ ಆ ಪೋಷಕರಿಗೆ ಹಂಚಲು ಅದೇ ಟ್ರೇ ನಲ್ಲಿ ತಗೊಂಡು ಹೋದೆ. 

ಆ ಸಂದರ್ಭದಲ್ಲಿ ಆ ಭಕ್ತೆ ಕಂಡಳು. 

ನಾನು ಜ್ಯೂಸು ತಗೊಂಡು ಮೆಟ್ಟಲು ಹತ್ತೋವಾಗ ಅವಳು ನನ್ನನು ಗಮನಿಸಿದ್ದು ನನ್ನ ಗಮನಕ್ಕೆ ಬಂತು. 

ಸರಿ ನಾನು ಹೇಳಿದೆ "ಮೇಡಂ ಜ್ಯೂಸು ತಗೋಳಿ "  

ಆ ಭಕ್ತೆ ಅವಕ್ಕಾದಳು 

"ಇಟ್ಸ್ ಓಕೆ"

ಅಂದರೂ ಅವಳ ಮುಖದಲ್ಲಿ ಬೇಸಿಗೆಯ ಸೆಕೆ ಎದ್ದು ಕಾಣುತಿತ್ತು. 

"ಮಾಮ್ ಪ್ಲೀಸ್ " ಎಂದೇ ನಾನು.......... 

ತಕ್ಪಣ್ಣಕ್ಕೆ ಜ್ಯೂಸು ತಗೊಂಡು ಸ್ಟೈಲ್ ಆಗಿ ಹೀರುತ್ತಾ ಕೂತಳು,,, 

ಈ ಗ್ಯಾಪ್ ನಲ್ಲಿ.......... 

ನನ್ನ ಮನೆ ದೇವಾಲಯಕ್ಕೆ ತುಂಬಾ ಹತ್ತಿರ..... 

ಅಂದು ನನ್ನ ಚಿಕ್ಕ ಪಾಪು ಮನೆಯಲ್ಲಿ ಇದ್ದಿದ್ದರಿಂದ 

ಪಟ್ಟನೆ ಮನೆಗೆ ಹೋಗಿ ನೋಡಿ ಬರೋಣ ಅಂತ,,,,,,, ಟ್ರೇ ನ ಅಲ್ಲೇ ಇದ್ದ ನನ್ನ ಸಹೋದ್ಯೋಗಿ ಕೈಯಾಯ್ಲ್ಲಿ ಇರಿಸಿ...... 

ಸರ ಸರನೆ ಹೆಜ್ಜೆಯಿಡುತ್ತ ಹೊರಟೆ........... 

ದೇವಾಲಯದಿಂದ ಹೊರಗೆ ಗೇಟ್ ನ ಬಳಿ ಬಂದ ನನಗೆ ಆ ಭಕ್ತೆ ಕಾಣಿಸಿದಳು. 

ಯಾರಿಗೋ ಕಾಯುತಿದ್ದಳು....... 

ಅದೇ ಸಂದರ್ಭ ಇನ್ನೇನು ನಾನು ಅವಳನ್ನು ದಾಟಿ ಹೋಗಬೇಕು.... 

ಅಲ್ಲಿ ಬಂದ ಒಬ್ಬ ಭಿಕ್ಷುಕ......... 

11 ಗಂಟೆ ಅಂದ್ರೆ ಯೋಚಿಸಿ............. 

ಉರಿ ಬಿಸಿಲು.... ಅವನು ಆ ಭಕ್ತೆಯ ಕಡೆ ಕೈ ಒಡ್ಡಿ ಏನೋ ಬಿಕ್ಷೆ ಕೇಳಿದ........ 

ನಾನು ಫ್ರೀಯಾಗಿ ಕೊಟ್ಟ ಜ್ಯೂಸುನ್ನು ಕುಡಿದ ಆ ಮಹಿಳೆಯ ರಿಯಾಕ್ಷನ್ ನೋಡ್ಬೇಕಿತ್ತು.......... 

ಆ ಭಿಕ್ಷುಕನ ಕಡೆಗೆ..............."ಅಯ್ಯೋ ಹೋಗಯ್ಯಾ............ ನಿಂಗೆ ನಾನೇ ಬೇಕಿತ್ತಾ??????????" 

"ಬಂದು ರಗಳೆ ಮಾಡ್ಲಿಕ್ಕೆ ನಿಂಗೆ ದುಡಿದು ತಿನ್ನಲು ಸಾಧ್ಯವಿಲ್ವಾ? ಹೋಗಯ್ಯಾ ಹೋಗು" ಎಂದಳು...........

ಅವಳ ಆ ವ್ಯವಹಾರ ಅವಳ ಆ ಮುಖದ ರಿಯಾಕ್ಷನ್ ನೋಡಿ ನನಗೆ ಅನಿಸಿತು................. ಅಪ್ಪಾ ತಂದೆ ಇವಳಿಗಾ ನಾನು ಜ್ಯೂಸು ಕುಡಿಯಲು ಕೊಟ್ಟಿದ್ದು ? 

ಒಂತರ ಇವಳು ಕೂಡ ಕುಡಿದದ್ದು ಬಿಕ್ಷೆಯ ಜ್ಯೂಸು ಅಲ್ವೇ ??????? 

ಆ ಒಂದು ಸಣ್ಣ ಗೆರೆ ಆ ಬಿಕ್ಷುಕನಿಗೂ ಇವಳಿಗೂ ಅಲ್ವೇ ? 

ಅವಳೂ ಕುಡಿದದ್ದು ಧರ್ಮಕ್ಕೆ .............ಇವನು ಕೇಳಿದ್ದು ಧರ್ಮಕ್ಕೆ. 

ಅವನು ಹೊಟ್ಟೆಗಿಲ್ಲದಿದ್ದರೂ,,,,,,,,,,,,,, ಕೇಳಿದರೂ ಸಿಗಲಿಲ್ಲ ..... 

ಇವಳಿಗೆ ಹೊಟ್ಟೆಗಿದ್ದರೂ ಕೇಳದೇನೆ ಸಿಕ್ಕಿತ್ತಲ್ಲ. 

ಎಂಥ ವಿಪರ್ಯಾಸ ?

ನನಗೆ ಅನಿಸಿತು..... ಛೆ ಸ್ವಲ್ಪ ಮೊದಲು ಈ ಭಿಕ್ಷುಕ ಬಂದಿದ್ರು 

ಗೇಟಿನ ಒಳಗೆ ಕರೆದು ಅವನಿಗೂ ಒಂದು ಗ್ಲಾಸ್ ಜ್ಯೂಸು ಕೊಟ್ಟಿದ್ದಿದರೆ...... 

ಈ ಮಹಿಳೆಗೆ ಅವಳೂ ಅವನಿಗಿಂತ ಹೊರತೇನಲ್ಲ'''''' 

ಎಲ್ಲರೂ ಒಂದಿಲ್ಲ ಒಂತರ ಭಿಕ್ಷೆಬೇಡಿ ತಿನ್ನುವವರೇ 

ಅನ್ನೋ ಒಂದು ಪಾಠ ಖಂಡಿತ ಕೊಡಬಹುದಿತ್ತೇನೋ.. 

ಎಲ್ಲಾನು ಪಟ್ ಅಂತ ತಲೆಗೆ ಬರಲ್ಲ ರೀ 

----------------------------------------------------------------------------------


ನಾನು ನೋಡಿದ ಗಮನಿಸಿದ ಮನಮುಟ್ಟವ ಸತ್ಯಘಟನೆಗಲ್ಲನ್ನೇ ಹೆಚ್ಚಾಗಿ ಬರೆಯಲಾಗಿದೆ. ನನ್ನ ಕಥೆ ಕವನ ಹಾಗು ನಿಜ ಜೀವನದ ನಿಶ್ಯಬ್ದ ಕಥೆಗಳು ಇಷ್ಟವಾದಲ್ಲಿ ನಿಮ್ಮ ಅನಿಸಿಕೆ ಬರೆಯಲು ಮರೆಯದಿರಿ ಇತರರಿಗೂ ಶೇರ್ ಮಾಡಲು ಮರೆಯದಿರಿ 


ನಿಶ್ಯಬ್ದ ಘಟನೆಗಳು 

Comments

Popular posts from this blog

ಕೈ ಗಳು ಇಲ್ಲದವನಿಗೂ ಅದೃಷ್ಟ ಅನ್ನೋದು ಖಂಡಿತ ಇದೆ

ಒಳ್ಳೆಯದು ಮಾತಾಡಿದರೆ ನಾಟಕ ಇವನದು ಅಂತಾರೆ,