ಪಕ್ಕದ್ಮನೆ ರಾಗಿ ಮುದ್ದೆ

ಕೆಲವರ ಶುದ್ಧತೆ .........

ಯಪ್ಪಾ ಹೇಗೆ ಬರೀಬೇಕು....... ಎಲ್ಲಿ ಶುರುಮಾಡಬೇಕು ಗೊತಾಗ್ತಿಲ್ಲ.....

ನಮ್ಮಲಿ ಒಬ್ರು ಇದ್ದಾರೆ............ ನನಗೆ ಯಾವಾಗಲು ಶುದ್ಧತೆಯ ಬಗ್ಗೆ ಪಾಠ ಮಾಡೋರು............. ಹಾಗಂತ ನನ್ನ ಶುದ್ಧತೆಯ ಬಗ್ಗೆ ಅವರೇನು ಮಾತಾಡೋದು ಅಥವಾ ಗೇಲಿ ಮಾಡೋದು ಹಾಗೇನಿಲ್ಲ.......... 

ಒಳ್ಳೆ ಜನ. 

ಆದರೆ ಅವರಲ್ಲಿ ಮಾತು ಶುರು ಮಾಡಿದರೆ ಸಾಕು..... 

"ಅಯ್ಯೋ ಬೆಳಿಗ್ಗೆಯಿಂದ ಕ್ಲೀನಿಂಗ್ ಆಗಿಲ್ಲರೀ...... ಬರೀ ಅಡುಗೆ ಮನೆ ಕ್ಲೀನ್ ಮಾಡೋ ಹೊತ್ತಿಗೆ ಹನ್ನೊಂದು ಗಂಟೆಯಾಯಿತು...... ಇನ್ನೂ ಸ್ನಾನದ ಕೋಣೆ ಬಾಕಿ ಇದೆ ಅಯ್ಯೋ ಅಯ್ಯೋ".....

ಇದೆ ಮಾತು. 

ಒಂದೊಂದು ಸಲ ನನಗೆ ಏನಾದ್ರು ಬಾರಿ ಅರ್ಜೆಂಟ್ ಮಾತಾಡೋದು ಇದ್ದು ಅವರಿಗೆ ಫೋನಾಯಿಸಿದ್ದು ಉಂಟು. 


ಆದರೆ ಅವರ ಕ್ಲೀನಿಂಗ್ ರಗಳೆ ಮುಗಿಯದೆ ನನ್ನ ಅರ್ಜೆಂಟ್ ಕಥೆ ಶುರು ಮಾಡಲು ಸಾಧ್ಯನೇ ಇಲ್ಲ. 

ಎಲ್ಲಾ ಕೇಳಿ ಕೇಳಿ ಕಿವಿ ತೂತು...... 

ಸರಿ ವಿಷ್ಯಕ್ಕೆ ಬರೋಣ. ಬಹಳ ಸಲ ಅವರ ಮನೆಗೆ ಹೋಗಿ ನಾನು ಕೂತದ್ದು ಉಂಟು. 

ಅವರು ಅಡುಗೆಯಲ್ಲಿ ಬಹಳ ಫಾಸ್ಟ್....... ನಾನು ಬಹಳ ನಿಧಾನ...... 

ನಿಧಾನ ಅನ್ನೋಕ್ಕಿಂತ ನನಗೆ ಅಡುಗೆ ಕೆಲಸ ಅಂದರೆ ಅಷ್ಟಕ್ಕಷ್ಟೇ.....

ಅವರ ಮನೆಗೆ ಹೋಗಿ ಕೂತಾಗ ಅಂದು.... ಅವರು ಚಪಾತಿ ಹಾಗು ಆಲೂಗಡ್ಡೆ ಪಲ್ಯ ಮಾಗೋ ಹಾಗಿತ್ತು. 

ನಾನು ಅಲ್ಲೇ ಅಡುಗೆ ಕೋಣೆಯಲ್ಲಿದ್ದ ಡಿನ್ನಿಂಗ್ ಟೇಬಲ್ ನಲ್ಲಿ ಕೂತಿದ್ದೆ. 

ಸರಿ ಆಲೂಗಡ್ಡೆಯನ್ನ ಎತ್ತಿಕೊಂಡು.... ಕೊಡಿ ನಾನು ಕಟ್ ಮಾಡ್ತೀನಿ ಅಂತ ಶುರು ಮಾಡಿದೆ. 

ನನ್ನ ಕಟಿಂಗ್ style  ಸ್ವಲ್ಪ ಬೇರೆ ಮತ್ತೆ ನಿಧಾನ. 

ಎರದೂ ಕೈಯಲ್ಲಿ ಉಗುರು ಬೆಳೆಸಿ ನೈಲ್ ಪೋಲಿಷ್ ಹಾಕಿರೋ ನಾನು ತೀರಾ ಸೂಕ್ಷ್ಮವಾಗಿ ಆಲೂಗಡ್ಡೆಯನ್ನು ಕತ್ತರಿಸುವದನ್ನು ನೋಡಿ ನಕ್ಕರು ಅವರು. 

ಹೇಗ್ರಿ ಪಾತ್ರೆ ಉಜ್ಜುತ್ತಿರ? ???????????

ಹೇಗ್ರಿ ಕ್ಲೀನ್ ಮಾಡ್ತಿರಾ ? ???

ಹೇಗ್ರಿ ಮ್ಯಾನೇಜ್ ಮಾಡ್ತಿರಾ? ?????????????????

ಎಂದರು. 

ಅಂದ ಹಾಗೆ ಅವರ ಮನೆಯಲ್ಲಿ ಕೆಲಸಕ್ಕೆ ಕೆಲಸದವಳು ಬೇರೆ ಬಂದು ಹೋಗ್ತಾಳೆ............. ಆದರೆ ನಮ್ಮನೆಯಲ್ಲೇ ನಾನೇ ಮಾಡೋದು............ ಅವರಿಗೂ ಗೊತ್ತು. 

ಅವರಿಗೆ ನನ್ನ ಪಾತ್ರೆ ಹಾಗು ನನ್ನ ಶುದ್ಧತೆಯ ಚಿಂತೆ ಹಿಡಿಯಿತು. 

ಶುರು ಇನ್ನೊಂದು ಗಂಟೆ ಭಾಷಣ ಶುದ್ಧ.... ಶುದ್ಧ... ಶುದ್ಧ... ಯಪ್ಪಾ....... 

ನಾನು ಎಂಜಾಯ್ ಮಾಡಿ ಕುಳಿತೆ.... ನನ್ನ ಆಲೂಗಡ್ಡೆ ಪಕ್ಕ ಚೌಕ ಚೌಕ ಅಳತೆ ಮಾಡಿ ತೂಗಿ ಕತ್ತರಿಸಿದಂತಿತ್ತು. 

"ವಾವ್ "

ಅಂದ್ರು ಅವರು. 

ಸರಿ ನಾನು ಮನೆಗೆ ಹೊರಟೆ. 

"ರೀ ಚಪಾತಿ ತಿನ್ಕೊಂಡು ಹೋಗಿ" ಅಂದ್ರು. 

ಅಯ್ಯೋ ಇಲ್ಲ ನಂಗೆ ಸ್ವಲ್ಪ ಗ್ಲುಟೆನ್ ಪ್ರಾಬ್ಲಮ್ ಇದೆ ನಾನು ಗೋಧಿ ತಿನ್ನಲ್ಲ. 

ಹೇಗೋ ತಪ್ಪಿಸಿ ಮನೆಗೆ ಬಂದೆ. 

ನಾನೋ ಸೋಂಬೇರಿ ಮನೆಗೆ ಬಂದು ಅಡುಗೆ ಕೋಣೆಗೆ ಹೋಗಿಲ್ಲ ಹಸಿವಾದರೂ ಲ್ಯಾಪ್ಟಾಪ್ ನಲ್ಲಿ ಕೂತೆ. 

ಅವರೋ ಬೆಳಗಿನ ತಿಂಡಿ ಮುಗಿಸಿ...... ಮಧ್ಯಾಹ್ನದ ಅಡುಗೆ ಮಾಡಿ ಸಾಯಂಕಾಲ ಏನ್ ಮಾಡಬೇಕು ಅನ್ನೋ ಚಿಂತೆಯಿಂದ ಸೊರಗಿ ಸುಣ್ಣ ಆಗಿದ್ರು ಅನ್ಸುತ್ತೆ. 

ಹೀಗೆ ಅವರ ಶುದ್ದತೆಯ ಪಾಠ ದಿನ.... ವಾರ.... ತಿಂಗಳು ಕಾಲ ನಡಿತಾ ಇತ್ತು. 

ಒಂದು ದಿನ ನನ್ನಸ್ನೇಹಿತರಿಗೊಬ್ಬರಿಗೆ ರಾಗಿ ಮುದ್ದೆ ತಿನ್ಬೇಕು ಅನಿಸಿ ಅವರಲ್ಲಿ ಕೇಳಿದೆ..... ಅವರು ಹೇಳಿದರು 

"ಹಾಂ ನ ಮಾಡಿ ಕೊಡುತ್ತೆ" 

ಅಂದರು... 

ಹಾಗೆ ಬೇಕಾಗಿದ್ದದು ನನ್ನ ಸ್ನೇಹಿತರಿಗಲ್ಲ ನನ್ನ ಯಜಮಾನರಿಗೆ ಹೇಳ್ಲಿಕ್ಕೆ ನನಗೆ ಮುಜುಗರ. 

ನಾನು ಹೇಳಿದೆ "ರೀ ನೀವ್ ಮಾಡಿ ಕೊಡಿ ಆದರೆ ಒಮ್ಮೆ ನಾನು ನೋಡಿ ಕಲಿತರೆ ಒಳ್ಳೆದಲ್ಲವಾ"

ಒಮ್ಮೆ ಮಾಡ್ಲಿಕ್ಕೆ ಹೋಗಿ ಸುಮಾರು ಒಂದೂವರೆ ಕೆಜಿ ಹಿಟ್ಟು ಹಾಳು..

ಪ್ರಪಂಚದಲ್ಲಿ ಏನೇನೋ ಕಲ್ತಿದ್ದಿವಿ ನಮ್ಮ ರಾಜ್ಯದ ರಾಗಿ ಮುದ್ದೆ ಕಳೀದಿದ್ರೆ ಹೇಗೆ? 

ಹಾಗಂತ ಅಂದು ಅವರ ಮನೆಗೆ ಹೋದೆ. 

ಅದು ಸ್ವಲ್ಪ ಚಳಿಗಾಲ. ನಾನು ಸಹಜವಾಗಿ ಸ್ವೆಟರ್ ಹಾಕೋದಿಲ್ಲ ಆದರೆ ಅವರನ್ನ ಅದೇ ಪಾಚಿ ಹಸಿರು ಸ್ವೆಟರ್ ಹಾಕದೆ ನೋಡಿದ್ದೇ ಇಲ್ಲ. 

ಅಂದೂ ಅವರು ಅದೇ ಸ್ವೆಟರ್ ನಲ್ಲಿ ಇದ್ದರು..... 

ಅದು ಸುಮಾರು 7 ಗಂಟೆ ಸಂಜೆ ಅಡುಗೆ ಕೊನೆಯಲ್ಲಿ ಸಣ್ಣದಾದ ಸಿಲ್ವರ್ ಮಡಕೆ ಸ್ಟವ್ ಮೇಲೆ ಇರಿಸಿ ನೀರನ್ನು ಕುದಿಸುತ್ತಿದ್ದರು...

ಹೌದು ಅದೇ ರಾಗಿ ಮುದ್ದೆ ನನಗೆ ಹೇಳಿ ಕೊಡ್ಲಿಕ್ಕೆ ಅಂತ. 

ನೀರು ಕುದಿತಾ ಇತ್ತು............ 

ನಾನು ಹತ್ತಿರ ಹೋದೆ. ಅವತ್ತು ಫುಲ್ ಡಿಸೈಡ್ ಆಗಿತು 

ನನ್ನ ಪೋಲಿಷ್ ಮಾಡಿದ ಉಗುರು ಕತ್ತರಿಸಿ ರಾಗಿ ಮುದ್ದೆ ಮಾಡಿಯೇ ತೀರೋದು ಅಂತ........ 

ಸರಿ 

"ನೋಡು ನೀರು ಇಷ್ಟು ಕುಡಿಯುವಾಗ ಹೀಗೆ ಹಿಟ್ಟು ಹಾಕಬೇಕು"

ಅಂತ ಒಂದು ಬೌಲ್ನಲ್ಲಿ ಹಿಟ್ಟನ್ನು ಸುರಿದರು. 

ಹೇಳಿದ್ನಲ್ಲ ನೀರು ಆಗಲೇ ಕುದಿತಾ ಇದ್ದಿದ್ದರಿಂದ ಹಿಟ್ಟು ಗಿಜ ಗಿಜ ಅಂತ ಕುದಿಯಲು ಶುರು..............

ನಾನು ಹತ್ತಿರ ಇದ್ದಿದ್ದರಿಂದ ನನಗೆ ಸಂಥಿಂಗ್ ರಾಂಗ್ ಅನ್ನಿಸಿತು.........

ಏನಿದು ಏನೋ ಗಿಜ ಗಿಜ ಜಾಸ್ತಿ ಇದಿಯಲ್ಲ ಅಂದೇ..... 

"ಅದು ಹಿಟ್ಟು ಕುಡಿತಿದೆ"

ಅಂದ್ರು. 

"ಇಲ್ಲ ನೋಡ್ರಿ ಸರಿಯಾಗಿ ಇಟ್ಸ್ ನಾಟ್ ಹಿಟ್ಟು ಬಾಸ್ ಅಂದೆ". 

ಅಡುಗೆ ಕೋಣೆಯಲ್ಲಿ ಲೈಟ್ ಬೆಳಕು ಸರಿಯಾಗೇ ಇತ್ತು...... ಆದರೂ

 "I know my self. My eyes can't cheat me"  

ನಾನು ನನ್ನ ಕೈಯಲ್ಲಿದ್ದ ಮೊಬೈಲ್ನಿಂದ ಬೆಳಕು ಬಿಟ್ಟೆ ಯಪ್ಪಾ ಹುಳ ರೀ ಹುಳ..... 

ಬಿಳಿ ಬಿಳಿ ಸಣ್ಣ ಸಣ್ಣ ಹುಳ. 

ಅವರು ಹೆದರಿ ಹೋದರು. 

ನಿಜ ಹೇಳ್ಬೇಕು ಅಂದ್ರೆ ಅವರು ನಿಜವಾಗ್ಲೂ ಹೆದರಿದ್ರ ಇಲ್ವಾ ಗೊತ್ತಿಲ್ಲ........ ಬಟ್ ತಲೆ ಕೆಟ್ಟೋಯಿತು ಅವ್ರಿಗೂ. 

ತೆಗದು ಕೆಳಗೆ ಇಟ್ರು ಮಡಕೆ. 

ಯಪ್ಪಾ .........

"ರೀ ನೀವ್ ನೋಡಿದ್ರಿಂದ ಆಯಿತು....... ಇಲ್ಲ ಅಂದ್ರೆ ನಾನು ಇದನ್ನೇ ನನ್ ಯಜಮಾನ್ರಿಗೆ ತಿನ್ನಿಸ್ತೀದ್ನಲ್ಲಾರೀ "ಅಂದ್ರು. 

ನಂಗೆ ಹೊಟ್ಟೆಯಲ್ಲಿದ್ದಿದು ಬಾಯಿಗೆ ಬಂದಿತ್ತು..... ಅಕ್ಕಿ,,,, ಹಿಟ್ಟಿನಲ್ಲಿ ಬೇಳೆ ಕಾಳಿನಲ್ಲಿ... ಹುಳ ಬೀಳೋದು ಸಹಜ..... 

ಆದರೆ ಅವರು ಮಾಡಿದ್ದೇನೆಂದ್ರೆ............

ಅವರ ಊರಿನಲ್ಲಿ ರಾಗಿ ಬೆಳೀತಾರೆ............ ಹಾಗಾಗಿ ಸಿಟಿ ಗೆ ಬರೋವಾಗ ಸುಮಾರು 6 ತಿಂಗಳಿಗೆ ಆಗೋವಷ್ಟು ಹಿಟ್ಟು ತಗೊಂಡು ಬಂದಿರ್ತಾರೆ.

ಈ ಹಿಟ್ಟನ್ನು ಇಟ್ಟಿದ್ದ ಜಾಗ ಬಂದು ಮಲಗೋ ಮಂಚದ ಅಡಿ. 

ನಾವು ಫಸ್ಟ್ ಫ್ಲೋರ್ ನಲ್ಲಿ ಇರೋದ್ರಿಂದ ನಮ್ ಫ್ಲೋರ್ನಲ್ಲಿ ನೀರಿನಂಶ ಜಾಸ್ತಿ.... 

ಹೀಗಾಗಿ ಹುಳ ಬಂದಿರಬಹುದು.... 

ಬಟ್ ಅವರು ದಿಟ್ಟ ಮಹಿಳೆ ಈ ಹುಳಕ್ಕೆಲ್ಲ ತಲೆ ಕೆಡಸಿ ಕೊಳ್ಲಿಲ್ಲ. 

ರಪಕ್  ಅಂತ ಹೊಸ  ಮೂಟೆಯೊಂದನ್ನ ಬಿಡಿಸಿ ಅದ್ರಲ್ಲಿ ಮುದ್ದೆ ಮಾಡಿ ನನಗೆ ಕೊಟ್ಟಿದ್ದಾಯಿತು. 

ನನಗೆ ಬೇಡ ಅಂತ ಹೇಳ್ಲಿಕ್ಕೆ ಸಂಕಟ........... ಯಾಕಂದ್ರೆ ಮಾಡಿದ್ದೆ ನಂಗೆ ಅಂತ ............

ಎಲ್ಲಿ ಬೇಡ ಅಂದ್ರೆ....................... ಬೇಜಾರ್ ಮಾಡ್ಕೊಂಡು ನೆಕ್ಸ್ಟ್ ಟೈಮ್ ಮನೆ ಒಳಗೆ ಕಾಲು ಇಡ್ಲಿಕ್ಕೆ ಬಿಟ್ಟಿಲ್ಲ ಅಂದ್ರೆ ಏನ್ ಮಾಡೋದು ಹಾಗಂತ ..............

ನಾನು ಮನೆಗೆ ತಂದು ನಮ್ಮ ಯಜಮಾನರಿಗೆ ಕೊಟ್ಟೆ. ಅವರು ಚಪ್ಪರಿಸಿ ತಿಂದ್ರು. 

ಮಲಗೋ ಹೊತ್ತಿಗೆ ನನಗೆ ಆ ವಿಚಾರ ನೆನೆಸಿ ಒಳ ಒಳಗೆ ನಗು ಬಂತು. 

ನನ್ ಯಜಮಾನ್ರು ಕೇಳಿಯೇ ಬಿಟ್ರು  "ಅದೇನು ಒಳ ಒಳಗೆ ನಗ್ತೀಯಾ ನಮಗೂ ಹೇಳು"

ಅಂತ. 

ನನಗೆ ಯಾವುದನ್ನು ಮುಚ್ಚಿ ಇಟ್ಟು ಅಭ್ಯಾಸನೆ ಇಲ್ಲ ..........

ನಡೆದದ್ದೆಲ್ಲ ಹೇಳಿದೆ.............. 

ಅದನ್ನು ಕೇಳಿ ಅವರೊಳಗೆ ಏನೆನೆಸಿತೋ ಗೊತ್ತಿಲ್ಲ......... ಹೊರಗೆ ಮಾತ್ರ ಏನು ತೋರ್ಪಡಿಸಿಲ್ಲ............ ಅಷ್ಟೇನಾ ಅಂತ ಸುಮ್ಮನಾದರು.

ಈಗ ನಿಮಗೆ ಅನ್ಸಿರಬೇಕಲ್ಲ್ವಾ...... ಹೌದು ನಿಮ್ಮ ಯಜಮಾನ್ರಿಗೆ ಮುದ್ದೆ ತಿನ್ನಿಸಿ ನೀವ್ಯಾಕೆ ಮುದ್ದೆ ತಿನ್ಲಿಲ್ಲ.............? ಎರಡನೇ ಸಲ ಮಾಡಿದ ಮುದ್ದೆಯಲ್ಲಿ ಹುಳ ಇರ್ಲಿಲ್ಲ ಅಲ್ವ??????????


ಹೌದು ಎರಡನೇ ಸಲ ಅವರು ತಗೊಂಡ ಹಿಟ್ಟು ಶುದ್ಧವಾಗೇ ಇತ್ತು...... ನೋ ಡೌಟ್. 

ಆದರೆ ಅವರು ಒಂದು ಸ್ವೆಟರ್ ಹಾಕ್ಕೊಂಡಿದ್ರು ಅಂದಿದ್ನಲ.... 

ಆ ಸ್ವೆಟರ್ ನ ಕೈ ತುದಿ ಇದ್ಯಲ್ಲ ಅದ್ರಲ್ಲೇ ಅವರು ಮುಖ ಉಜ್ಜುತಿದ್ರು......... 

ಹಾಗೆ ಅದೇ ತುದಿ ಮುದ್ದೆ ಮಾಡುವಾಗ ಆ ಪಾತ್ರೆಯಲ್ಲಿದ್ದ ಹಿಟ್ಟಿಗೂ ತಾಕುತ್ತಿತ್ತು.

ರೀ ನಿಮಗೆ ಅನ್ನಿಸಬಹುದು ಅಲ್ವಾ "ಹೋಟೆಲ್ನಲ್ಲಿ ತಿನ್ನುವಾಗ ಯಾರ್ ನೋಡ್ತಾರೆ ಶುದ್ಧತೆ ತಿನ್ಕೊಂಡು ಬರಲ್ವಾ".. 

"ಹೌದು ನೋಡದೆ ತಿನ್ನೋದಕ್ಕೂ ನೋಡಿದ್ಮೇಲೆ ತಿನ್ನೋವಾಗ ಆಗೋ ಸಂಕಟ ಇದ್ಯಲ್ಲ ಅದು ಒಂದೇ ತರ ಅಲ್ಲರೀ "..........

ಈ ವಿಚಾರ ನಡೆದ ನಂತರ ಒಂದು ಮಹತ್ತರ ಬೆಳವಣಿಗೆ ಆಯಿತು ಅದೇನಂತೀರಾ ??????????????

ಆ ನನ್ನ ಸ್ನೇಹಿತೆ ದಿನ ಬೆಳಗಾದರೆ ಅವರ ಶುದ್ಧತೆಯ ಬಗ್ಗೆ ಭಾಷಣ ಬೀಗಿತಿದ್ರಲ್ಲ ಅದು ನಿಂತು ಹೋಯಿತು.

ಈಗ ನನ್ನ ಪ್ರಾರ್ಥನೆ ಇಷ್ಟೇ ಈ ನನ್ನ ಕಥೆ ಅವರಿಗೆ ತಲುಪದಿದ್ದರೆ ಅಷ್ಟೆ ಸಾಕು.

-----------------------------------------------------------------------------------
ಇನ್ನೊಂದು ನೈಜ ಘಟನೆ ಬರೆದಿದ್ದೇನೆ........ ತಪ್ಪದೆ ಓದಿ, 

ಈ ಕಥೆಗಳ ಉದ್ದೇಶ ಇಷ್ಟೇ ಇತ್ತೀಚಿಗೆ ಬಹಳಷ್ಟು ಸಾಂಕ್ರಾಮಿಕ ರೋಗಗಳು ಹರಡುತ್ತಿವೆ. 

ಈ ಎಲ್ಲಾ ಸಣ್ಣ ಪುಟ್ಟ ವಿಷಯಗಳನ್ನು ತಿಳಿಯೋದ್ರಿಂದ ಅದನ್ನ ತಡೀಬಹುದು ಅನ್ನೋದು ನನ್ನ ಆಶಯ.

ನಿಶ್ಯಬ್ದ ಘಟನೆಗಳು 

Comments

Popular posts from this blog

ಕೈ ಗಳು ಇಲ್ಲದವನಿಗೂ ಅದೃಷ್ಟ ಅನ್ನೋದು ಖಂಡಿತ ಇದೆ

ಒಳ್ಳೆಯದು ಮಾತಾಡಿದರೆ ನಾಟಕ ಇವನದು ಅಂತಾರೆ,